Mahatma Gandhi |
ಮಧ್ಯವಯಸ್ಸಿನ ಕದ ತಟ್ಟುತ್ತಿದ್ದೇನೆ. ಆದಾಗ್ಯೂ ಕಳೆದ 40 ವರ್ಷಗಳಿಂದ ಈತ ನನ್ನನ್ನು ಬೇಚೈನಾಗಿ ಉಳಿಸಿದ್ದಾನೆ ಎಂದರೆ ನೀವು ನಂಬಲಿಕ್ಕಿಲ್ಲ. ಅಲ್ಲಲ್ಲಿ ಮಿಣುಕು ದೀಪದಂತೆ, ಉರಿವ ದೀವಟಿಗೆಯಂತೆ, ಮುಗ್ಧವಾಗಿದ್ದ ನನ್ನಜ್ಜನಂತೆ, ಕೆಲವು ಸಲ ಬೇತಾಳದಂತೆ ಈ ಜೀವ ನನ್ನ ಜೀವನ ನಿರ್ಧಾರದ ಹಲವು ತಿರುವಿನ ಸಂದರ್ಭಗಳಲ್ಲಿಯೂ ಕುಣಿದಾಡಿ ಮಾಯವಾಗಿದೆ. ಗುಂಡಿನ ರಾತ್ರಿಗಳಲ್ಲಿ, ಆಲಿಂಗನದ ಆಟಗಳಲ್ಲಿ, ಸತ್ಯ-ಸುಳ್ಳುಗಳ ಬದುಕಿನ ಹಲವು ವಹಿವಾಟುಗಳಲ್ಲಿ, ಈತ ನನ್ನನ್ನು ಪೆಡಂಭೂತದಂತೆ ಬೆನ್ನಟ್ಟಿದ್ದಾನೆ. ಹಾಗೆಯೇ ನಿರ್ವೀಣ್ಯನಾಗಿ ಕುಸಿದು, ಕೊನೆಯುಸಿರಿನತ್ತ ಮನಸ್ಸು ಹೊರಳುವಾಗ ಜೋಹಾನ್ಸ್‍ಬರ್ಗ್‍ದ ಆ ರೈಲ್ವೆಸ್ಟೇಷನ್‍ನಿಂದ ನೇರವಾಗಿ ಎದುರು ಬಂದು ನಿಂತು `ಫಟಾರ್’ ಎಂದು ನನ್ನ ಮುಖಕ್ಕೆ ಹೊಡೆದಿದ್ದಾನೆ, ಎದೆಗೆ ಒದ್ದಿದ್ದಾನೆ. ನನ್ನ ಪಾಲಿನ ಆಲದ ಮರ, ನನ್ನ ಊಟದ ಕರಿಬೇವು ಎರಡೂ ಆಗಿರುವ ಮುಗ್ಧನಗೆಯ, ಸೋರೆಕಾಯಿಯಂಥ ತಲೆಯ, ಈ ಚಾಣಾಕ್ಷ ಮುದುಕ ನನ್ನ ಅತೀ ಪ್ರೀತಿಯ ವಸ್ತುಗಳಲ್ಲಿ ಒಂದಾಗಿದ್ದಾನೆ.”
Mahatma Gandhi |
Mahatma Gandhi |
ಇದೊಂದು ರೀತಿ ಗಾಂಧಿಯೊಂದಿಗಿನ ನನ್ನ ವನವಾಸ ಅಥವಾ ಗಾಂಧೀವಾಸ. ಅಂತಿಮವಾಗಿ ತಿಳಿದಿದ್ದಿಷ್ಟೇ, ಜನಮುಖಿಯಾಗಬೇಕಾದ ಬಾಳಿಗೆ ಪಾಂಡಿತ್ಯದ ಅವಶ್ಯಕತೆಯಿಲ್ಲ. ಮನುಷ್ಯನ ಕ್ರಿಯಾ ಸರಳತೆ ಮಾತನಾಡಿದಷ್ಟು ಸ್ಫುಟವಾಗಿ ಪಾಂಡಿತ್ಯ ಮಾತನಾಡುವುದಿಲ್ಲ. ಸಂತಸದ ಸಂಗತಿಯೇ ಇದು. ಈ ಗಾಂಧಿ(Gandhi) ಪಂಡಿತನಾಗಿರಲಿಲ್ಲ, ಹಟಮಾರಿ ಮನುಷ್ಯನಾಗಿದ್ದ. ಕಸ ಗುಡಿಸುತ್ತಾ, ಜಗಳಾಡುತ್ತಾ, ಉಪವಾಸ ಬೀಳುತ್ತಾ ಆತ ತನ್ನೊಳಗಿನದನ್ನು ಸ್ವಚ್ಛಗೊಳಿಸಿಕೊಳ್ಳಲು ಪ್ರಯತ್ನಿಸಿದಷ್ಟೂ ಹೊರಗಣವರಿಗೆ ಮಹಾತ್ಮನಾದ. ಸೃಷ್ಟಿಯ ವೈಚಿತ್ರ್ಯ ಇದಲ್ಲವೇ? ಮರದ ಬೇರು ನೆಲದೊಳಗಿಳಿದಷ್ಟೂ ಅದರ ಹೊರಗಣ ಸೊಬಗು ಹೆಚ್ಚಾಗುತ್ತದೆ. ಹೀಗೆ ಹೆಮ್ಮರದ ಬೇರುಗಳಂತೆ ಇಳಿದ ಈ ಗಾಂಧಿ(Gandhi) ನನ್ನ, ನಮ್ಮ ಹಾಗೂ ಪ್ರಪಂಚದ ಸಂವೇದನೆಗಳೊಳಗೆ.”
ಹೆಚ್ಚಿನ ಓದಿಗಾಗಿ:- `ಗಾಂಧಿ: ಅಂತಿಮ ದಿನಗಳು’& 'ಗಾಂಧಿ:ಮುಗಿಯದ ಅಧ್ಯಾಯ' ಕಣ್ವ ಪ್ರಕಾಶನ, ಬೆಂಗಳೂರು, ಮೊ-9845052481
No comments:
Post a Comment