ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ ಯಾವುದು? ಎಂದು
ಯಾರಾದರೂ ನನ್ನನ್ನು ಕೇಳಿದರೆ ‘ಅವ್ವ’ ಎಂದೇ ಹೇಳುತ್ತೇನೆ. ಅವ್ವನನು ಹುಗಿದು ಬಂದು ನಿರಮ್ಮಳವಾಗಿರುವುದು
ಯಾರಿಗಾದರೂ ಸಾಧ್ಯವೇ? ನಿಮಗೆ ಬೇಜಾರಾದರೂ ಚಿಂತೆಯಿಲ್ಲ, ನಾನು ಮತ್ತೆ ಮತ್ತೆ ಹೇಳುತ್ತೇನೆ-ತಾಯಿಗೂ
ನಾಯಿಗೂ ಬಹಳ ಸಾಮ್ಯತೆಗಳಿವೆ. ಮುಪ್ಪಿನ ದಾರಿದ್ರ್ಯದಲ್ಲಿ ಅವ್ವನ ಪಾಡು, ನಾಯಿ ಪಾಡಾಗಿರುತ್ತದೆ.
ತನ್ನ ಕಂದಮ್ಮಗಳ ರಕ್ಷಣೆಗೆ ಅವಳು ನಾಯಿಯಂತೆ ಕಾಲು ಕೆದರಿ ಜಗಳಕ್ಕೂ ಸಿದ್ಧಳಾಗುತ್ತಾಳೆ. ಮಕ್ಕಳ ಬೆಳೆಯುವಿಕೆಯ
ಪ್ರಕ್ರಿಯೆ ಅವ್ವ ಕಳೆದುಕೊಳ್ಳುವ ವ್ಯಥೆಯ ಹಾಡಾಗುತ್ತದೆ. ನಾವು ಹೆಂಡಂದಿರ ತೋಳುಗಳ ಬಿಸುಪಿಗೆ ಹೋದಷ್ಟೂ
ಅವ್ವ ಬರಿದಾಗುತ್ತಾಳೆ. ನಾವು ಗಹನವಾದಷ್ಟೂ ಅವಳು ವಾಚಾಳಿಯಗುತ್ತಾಳೆ. ಮುಪ್ಪು ಆಕೆಯ ಮೈ ಏರಿದಷ್ಟೂ
ಅವಳು ಹತಾಶಳಾಗುತ್ತಾಳೆ, ಜಗಳಗಂಟಿಯಾಗುತ್ತಾಳೆ, ಮಣ್ಣುಮಯವಾಗಿ ಕಣ್ಣು ಮುಚ್ಚುವವರೆಗೂ ಅವಳು ಪ್ರೀತಿಗಾಗಿ
ಹಪಹಪಿಸುತ್ತಾಳೆ. ನಮ್ಮ ಕವಿಗಳ ಸಾಲುಗಳಲ್ಲಿಯೇ ಅವಳನ್ನು ವ್ಯಾಖ್ಯಾನಿಸಬೇಕೆಂದರೇ, ಅವಳು ‘ಬನದ ಕರಡಿ’,
‘ಭುವನದ ಬಾಗ್ಯ’, ‘ಎದೆಯ ಬೂದಿ’, ‘ಛಲದ ಹಾದಿ’,‘ ನೆಲದ ಕೋಟಿ ಕೋಟಿ ಜೀವ ಜನ್ಮದ ಧಾರೆಯದಾರಿ’.Translate
Thursday, 6 June 2013
ಬನದ ಕರಡಿ:ಅವ್ವ
ಜಗತ್ತಿನಲ್ಲಿ ಅತೀ ರೋಮಾಂಚಕಾರಿ ಶಬ್ದ ಯಾವುದು? ಎಂದು
ಯಾರಾದರೂ ನನ್ನನ್ನು ಕೇಳಿದರೆ ‘ಅವ್ವ’ ಎಂದೇ ಹೇಳುತ್ತೇನೆ. ಅವ್ವನನು ಹುಗಿದು ಬಂದು ನಿರಮ್ಮಳವಾಗಿರುವುದು
ಯಾರಿಗಾದರೂ ಸಾಧ್ಯವೇ? ನಿಮಗೆ ಬೇಜಾರಾದರೂ ಚಿಂತೆಯಿಲ್ಲ, ನಾನು ಮತ್ತೆ ಮತ್ತೆ ಹೇಳುತ್ತೇನೆ-ತಾಯಿಗೂ
ನಾಯಿಗೂ ಬಹಳ ಸಾಮ್ಯತೆಗಳಿವೆ. ಮುಪ್ಪಿನ ದಾರಿದ್ರ್ಯದಲ್ಲಿ ಅವ್ವನ ಪಾಡು, ನಾಯಿ ಪಾಡಾಗಿರುತ್ತದೆ.
ತನ್ನ ಕಂದಮ್ಮಗಳ ರಕ್ಷಣೆಗೆ ಅವಳು ನಾಯಿಯಂತೆ ಕಾಲು ಕೆದರಿ ಜಗಳಕ್ಕೂ ಸಿದ್ಧಳಾಗುತ್ತಾಳೆ. ಮಕ್ಕಳ ಬೆಳೆಯುವಿಕೆಯ
ಪ್ರಕ್ರಿಯೆ ಅವ್ವ ಕಳೆದುಕೊಳ್ಳುವ ವ್ಯಥೆಯ ಹಾಡಾಗುತ್ತದೆ. ನಾವು ಹೆಂಡಂದಿರ ತೋಳುಗಳ ಬಿಸುಪಿಗೆ ಹೋದಷ್ಟೂ
ಅವ್ವ ಬರಿದಾಗುತ್ತಾಳೆ. ನಾವು ಗಹನವಾದಷ್ಟೂ ಅವಳು ವಾಚಾಳಿಯಗುತ್ತಾಳೆ. ಮುಪ್ಪು ಆಕೆಯ ಮೈ ಏರಿದಷ್ಟೂ
ಅವಳು ಹತಾಶಳಾಗುತ್ತಾಳೆ, ಜಗಳಗಂಟಿಯಾಗುತ್ತಾಳೆ, ಮಣ್ಣುಮಯವಾಗಿ ಕಣ್ಣು ಮುಚ್ಚುವವರೆಗೂ ಅವಳು ಪ್ರೀತಿಗಾಗಿ
ಹಪಹಪಿಸುತ್ತಾಳೆ. ನಮ್ಮ ಕವಿಗಳ ಸಾಲುಗಳಲ್ಲಿಯೇ ಅವಳನ್ನು ವ್ಯಾಖ್ಯಾನಿಸಬೇಕೆಂದರೇ, ಅವಳು ‘ಬನದ ಕರಡಿ’,
‘ಭುವನದ ಬಾಗ್ಯ’, ‘ಎದೆಯ ಬೂದಿ’, ‘ಛಲದ ಹಾದಿ’,‘ ನೆಲದ ಕೋಟಿ ಕೋಟಿ ಜೀವ ಜನ್ಮದ ಧಾರೆಯದಾರಿ’.
Subscribe to:
Post Comments (Atom)
No comments:
Post a Comment