ಕವಿತೆಗೆ ಸಾವಿಲ್ಲ ಯಾಕೆಂದರೆ ಅದು ಹುಟ್ಟಲಿಲ್ಲ. ಇದುವರೆಗಿನ ಎಲ್ಲ ಭಾಷೆಗಳೊಳಗಿನ ಎಲ್ಲ ಕಾವ್ಯವೂ ನಮ್ಮ ಪಠ್ಯಕ್ರಮದ ವಿಭಜನೆಯಷ್ಟೆ. ಕವಿತೆ, ಅದು ಧರ್ಮ ಹೀಗಾಗಿ ಅದರ ವಿಭಜನೆ ಸಾಧ್ಯವಿಲ್ಲ. ಅದು ಮುಗಿಯದ ದಾರಿ. ಹೀಗಾಗಿ ನಮ್ಮ ವಿಭಜನೆಗಳಾದ ಹಳೆಕಾವ್ಯ, ಹೊಸಕಾವ್ಯ,
ಇಂಗ್ಲೀಷ್ಕಾವ್ಯ,
ನವೋದಯ,
ನವ್ಯ,
ಪ್ರಗತಿಶೀಲ,
ದಲಿತ,
ಬಂಡಾಯ,
ಬಂಡಾಯೋತ್ತರ ಕಾವ್ಯ ಎನ್ನುವುದು ನಾವೆತ್ತಿಕೊಂಡ ಕಾವ್ಯದ ರಸಯಾತ್ರೆಯಲ್ಲಿ ವಿರಮಿಸಿದ ತಾಣಗಳಷ್ಟೆ. ಅದು ಕಾವ್ಯವೇ ವಿರಮಿಸಿದ ಹಂತವಲ್ಲ. ಕವಿತೆ ವಿರಮಿಸುವುದಿಲ್ಲ ಯಾಕೆಂದರೆ ಅದಿನ್ನೂ ಆರಂಭವೇ ಆಗಿಲ್ಲ. ಮಹತ್ವದ ಕಾವ್ಯಕ್ಕೆ, ಕವಿಗೆ ನಾವಿನ್ನೂ ಕಾಯುತ್ತಿದ್ದೇವೆ. ಇದು ಮಾನವ ಜನಾಂಗವನ್ನು, ಅದರ ಉದಯವನ್ನು ಕುರಿತು ಅರವಿಂದರು ಹೇಳಿದ ವಾಕ್ಯದಂತೆ. `ಮಾನವ ಹೃದಯವನ್ನೇ ಯೋನಿಯಾಗಿಸಿಕೊಂಡು ಹುಟ್ಟಿಬರಲಿಹುದು ದೇವ ಜನಾಂಗ, ಹೀಗೆಯೇ ಕವಿತೆ. ಮನುಷ್ಯ, ಪ್ರಕೃತಿಯ ಒಂದು ಅದ್ಭುತ ಕವಿತೆ.
ಹೆಚ್ಚಿನ ಓದಿಗಾಗಿ: `ಕನ್ನಡಕ್ಕೊಂದು ಕನ್ನಡಿ, ಕಣ್ವ ಪ್ರಕಾಶನ, ಬೆಂಗಳೂರು
ನಿಮ್ಮ ಮಾತು ನಿಜ ಸರ್, ಕವಿತೆಗೆ ಒಂದೂ ಸಾವಿಲ್ಲ.. ಸಹಸ್ರ ಜನ್ಮಗಳಿವೆ...
ReplyDelete